    ಮೂಲದೊಡನೆ ಪರಿಶೀಲಿಸಿ
ಕೊಂಡ

ಮಧ್ಯ ದ್ರಾವಿಡ ಭಾಷೆಗಳಲ್ಲೊಂದು. ಕೂಬಿ ಎಂದೂ ಇದನ್ನು ಕರೆವುದಿದೆ. ಇದು ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಿಂದ 70 ಮೈಲಿ ವಾಯವ್ಯಕ್ಕಿರುವ ಅರಕು ಕಣಿವೆಯ ನಿವಾಸಿಗಳ ವ್ಯವಹಾರದಲ್ಲಿದೆ. ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ಸುಮಾರು 20,000 ಈ ಜನರನ್ನು ಕೊಂಡ ದೊರಲು, ಕೊಂಡಕಾಪುಲು, ಓಜಲು ಮತ್ತು ಪಾಂಡವರೈತುಲು ಎಂಬುದಾಗಿ ಕರೆಯುತ್ತಾರೆ. ಈ ಭಾಷೆಯಲ್ಲಿರುವ ವರ್ಣಗಳು ಇವು:
	ಸ್ವರಗಳು 10 :	ಅ, ಆ, ಇ, ಈ, ಉ, ಊ, ಎ, ಏ, ಒ, ಓ,
	ವ್ಯಂಜನಗಳು 23:	ಕ, ?, ಗ, ಙ, ಸ, ಜ(Z), ಟ, ಡ, ಣ,
			ತ, ದ, ನ, ಪ, ಬ, ಮ, ಯ, ರ, ¾, ¾್ಹ (ಖ),
			ಲ, ಢ, ವ, ಹ.
	ಈ ಭಾಷೆಯಲ್ಲಿರುವ ವಿಶಿಷ್ಟ ವರ್ಣಗಳು ಕಂಠಮೂಲೀಯ ಸ್ಪಶ್ರ್ಯ=/?/, ಪರುಷ, ಸರಳ ¾=/ಖ/(¾ ್ಹ,/ಡಿ/¾); ಈಷತ್ ಸ್ಪøಷ್ಟ ಢಕಾರ=/ಡಿ/. ಇತರ ಎಲ್ಲ ದ್ರಾವಿಡ ಭಾಷೆಗಳಲ್ಲಿ ನಷ್ಟವಾಗಿ ಹೋದ ರ ¾ ಭೇದ ಈ ಭಾಷೆಯಲ್ಲಿ ಇನ್ನೂ ಉಳಿದುಕೊಂಡಿದೆ. ಈ ಭಾಷೆಯಲ್ಲಿ ಲಿಂಗ ಎರಡು ವಿಧ : ಮಹತ್ ಮತ್ತು ಅಮಹತ್. ಅಮಹತ್ ಬಹುವಚನ-ಕ್/-ಕು-ಅಥವಾ-/ಙï-ಙು ಪ್ರತ್ಯಯ ಸೇರಿಸುವುದರಿಂದ ಏರ್ಪಡುತ್ತವೆ.
	ಪಂಡು (ಏಕವಚನ), ಪಟ್ಕು (ಬಹುವಚನ)
	ಕುಪ್ಪ (  "  ), ಕುಪ್ಪೆಙï ( " )
	ಮಹತ್ ಬಹುವಚನ-ರ್ ಪ್ರತ್ಯಯ ಸೇರಿಸುವುದರಿಂದ ಏರ್ಪಡುತ್ತದೆ.
	ಅನ=ಅಣ್ಣ, ಅನಾರ್=ಅಣ್ಣಂದಿರು
	ಸರ್ವನಾಮಗಳು: ಉತ್ತಮಪುರುಷ (ಏಕವಚನ)-ನಾನ್
	         "    (ಬಹುವಚನ)-ಮಾಪ್
	         "    (ಬಹುವಚನ)-ಮಾಟ್
	       ಮಧ್ಯಮಪುರುಷ (ಏ.ವ.)  - ನೀನ್
			   "    (ಬ.ವ.)  -ಮೀರ್
	       ಪ್ರಥಮಪುರುಷ (ಮಹತ್ ಏ.ವ.)-ವಾನುù=ಅವನು
	         "    (ಮಹತ್ ಬ.ವ.)-ವಾರ್=ಅವರು
            "    (ಅಮಹತ್ ಏ.ವ.)-ಅದಿ=ಅವಳು, ಅದು.
            "    (ಅಮಹತ್ ಬ.ವ.)-ಅವಿ=ಅವು.
	ಸಂಖ್ಯಾವಾಚಕಗಳು: ಉನಿù, ರುಂಡಿ, ಮೂನಿù, ನಾಲ್ಗಿ, ಉಳಿದುವೆಲ್ಲ ತೆಲುಗಿನಂತೆ.
	ನಾಮವಿಭಕ್ತಿಗಳು: ವಿಭಕ್ತಿ ಪ್ರತ್ಯಯಗಳ ಮುಂದೆ ಏಕವಚನದಲ್ಲಿ ತಿ, ದಿ, ಇ, ಪ್ರತ್ಯಯಗಳನ್ನು 
  			ಸೇರಿಸುತ್ತಾರೆ   				
          ಬಹುವಚನದಲ್ಲಿ ಇ, ಅ ಪ್ರತ್ಯಯಗಳನ್ನು ಸೇರಿಸುತ್ತಾರೆ.
           ದ್ವಿತೀಯೆ-ಚತುರ್ಥಿ: ಙï (ಏ,ವ.) ಮರನ್-ದಿ-ಙï=ಮರವನ್ನು, ಮರಕ್ಕೆ
	      ತೃತೀಯೆ-ಪಂಚಮಿ: -ಅಂಡ್ (ಏ.ವ.) ಮರತ್-ಅಂಡ್, ಮರದಿಂದ.
			ಷಷ್ಠಿ: ತಿ, ದಿ (ಏ,ವ.) ಮರ-ತಿ,=ಮರದ
			ಸಪ್ತಮಿ: ಕ, ತು, ತೊ (ಏ.ವ) ಮರ-ಕ=ಮರದಲ್ಲಿ
ಬಹುವಚನದಲ್ಲಿ ಎಲ್ಲ ಕಡೆಗಳಲ್ಲಿಯೂ-ಙï ಸೇರಿಸುತ್ತಾರೆ
ಮರ-ಕ-ಙï=ಮರಗಳಲ್ಲಿ.   .
ಕ್ರಿಯಸ್ವರೂಪಗಳು: ಈ ಭಾಷೆಯಲ್ಲಿ ಭೂತ, ವರ್ತಮಾನ ಮತ್ತು ತದ್ಧರ್ಮ (ಹ್ಯಾಬಿಚ್ಯುಯಲ್) ಕ್ರಿಯಾಸ್ವರೂಪಗಳು ಏರ್ಪಡುತ್ತವೆ. ಭೂತಕಾಲದಲ್ಲಿ ವ್ಯತಿರೇಕ ರೂಪಗಳು (ಪಾಸ್ಟ್ ನೆಗೆಟಿವ್ ಫಾರಂಸ್) ಪ್ರತ್ಯಯ ಸೇರಿಸುವುದರಿಂದ ಏರ್ಪಡುತ್ತವೆ.
ತಿನ್-ಅನ್=ಅವನು ತಿನ್ನುವನು
ತಿ¾್ಹನ್=ಅವನು ತಿಂದನು
ತಿನ್-ಜಿóನ್-ಅನ್=ಅವನು ತಿನ್ನುತ್ತಾನೆ
ತಿನ್-?-ಎನ್=ಅವನು ತಿನ್ನುವುದಿಲ್ಲ
ತಿನ್-?-ಎತ್-ಅನ್=ಅವನು ತಿನ್ನಲಿಲ್ಲ
ತಿನ್ಜ್=ತಿಂದು
ತಿ¾õÉ್ಹಙï=ತಿಂದರೆ, ತಿನೆ¾ಙï=ತಿನ್ನುವುದು-ಇತ್ಯಾದಿ
(ಬಿಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ